ಕರ್ನಾಟಕಕ್ಕೆ ಸಾಹಿತ್ಯದ ವಿಷಯದಲ್ಲೇ ಏಳು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಇಲ್ಲಿ ಒಳ್ಳೆಯ ಬರಹಗಾರರಿದ್ದಾರೆ. ಜೊತೆಗೆ ಬರಹವನ್ನು ವಿಚಿತ್ರ ಶಬ್ದಗಳ ಬಳಕೆಯಿಂದ ಪತ್ರಿಕೆಯ ಮುಖಪುಟಕ್ಕೆ ಶೀರ್ಷಿಕೆ ನೀಡಿ ಜನರು ತಿರುಗಿ ನೋಡುವಂತೆ ಮಾಡಿರುವ ಸಂಪಾದಕರೂ ಇದ್ದಾರೆ. ಈ ವಾರದ ಹಾಯ್ ಬೆಂಗಳೂರ್ ನೋಡಿದರೆ ಈ ಸಂಗತಿ ನಮಗೆ ವಿದಿತವಾಗುತ್ತದೆ. ದೊಡ್ಡ ರಾಜಕಾರಿಣಿಗಳ ಸಂಬಂಧಗಳನ್ನು ಇದ್ದೋ ಇಲ್ಲದೆಯೋ ವಿಜೃಂಭಿಸುತ್ತಾ ಆ ವಿಷಯ ಬರುಬರುತ್ತಾ ಜನಸಾಮಾನ್ಯರಿಗೂ ವಾಕರಿಕೆಯಾಗಿ ಅಂತಹ ಸಂಬಂಧಗಳನ್ನು ಜನತೆ ಒಪ್ಪುವ ಮಟ್ಟಕ್ಕೆ ಪತ್ರಿಕೆಗಳು ಪ್ರಚಾರ ನೀಡುತ್ತಿವೆ. ಈ ಹಿಂದೆ ಕುಮಾರಸ್ವಾಮಿ ವಿಷಯವನ್ನು ಹೀಗೆ ಅನಗತ್ಯವಾಗಿ ತರಲಾಗತಿತ್ತು. ಯಾರನ್ನೋ ರಂಜಿಸಲು, ಯಾರನ್ನೋ ತೃಪ್ತಿ ಪಡಿಸಲು ಶಬ್ದಗಳನ್ನು ಬಳಸುವಾಗ ಎಲ್ಲರೂ ಹಿತಮಿತ ಕಾಯುವುದು ಅವಶ್ಯ. ನಾಡಿನಲ್ಲಿ ಪತ್ರಿಕೋದ್ಯಮದಲ್ಲಿ ಪ್ರಖ್ಯಾತರಾದ ಎಲ್ಲಾ ಪ್ರಮುಖ ಪತ್ರಿಕೆಗಳ ಸಂಪಾದಕರು ಯಾಕೆ ಇಂತಹ ಎಡವಟ್ಟು ಮಾಡುತ್ತಾರೋ ಗೊತ್ತಿಲ್ಲ... ಕಷ್ಟ ಸುಖ ಕೀರ್ತಿ,ಅಪಕೀರ್ತಿ ಎಲ್ಲಾ ಅನುಭವಿಸಿದ ಪತ್ರಕರ್ತರೇ ಅಸಹ್ಯ ಶಬ್ದ ಬಳಸಿ ನಾಡಿನ ಪ್ರಮುಖರನ್ನು ಹೀಯಾಳಿಸುವುದು ತರವಲ್ಲ... ರಾಜಕಾರಿಣಿಗಳ ಭ್ರಷ್ಟತನದ ಬಗ್ಗೆ ಅವರ ಕುಟುಂಬದ ಭ್ರಷ್ಟತೆಯ ಬಗ್ಗೆ ಬರೆದರೆ ಕರ್ನಾಟಕದ ಜನತೆ ಖುಷಿ ಪಡುತ್ತಾರೆ.
ಒಬ್ಬ ಪತ್ರಕರ್ತ ಗಣಿಲೂಟಿಯನ್ನು ನೋಡಿ ಮೈನಿಂಗ ಮಾಫಿಯಾ ಅಂತ ಬರೆದರೆ ಅದಕ್ಕೆ ವಿರುದ್ಧವಾಗಿ ಅವರ ಜೊತೆ ನಲವತ್ತು ಕಳ್ಳರನ್ನು ಸೇರಿಸಿ ಮತ್ತೊಂದು ಪುಸ್ತಕ ಬರೆದು ಮೊದಲಿನ ಪುಸ್ತಕದಲ್ಲಿರುವವರು ಕಡಿಮೆ ಭ್ರಷ್ಟರು, ನಾನು ಬರೆದಿದ್ದೇನಲ್ಲ ಅದರಲ್ಲಿ ತಿಮಿಂಗಿಲಗಳಿವೆ ಎಂದು ಸಂಪಾದಕೀಯದಲ್ಲಿ ಬರೆಯುತ್ತಾರೆ. ಇತ್ತೀಚೆಗೆ ಗಣಿ ಸಂಬಂಧಿತ ವರದಿಯಲ್ಲಿ ಅಂತಾಹುದ್ದೇನಿಲ್ಲ... ಮುಂದೆ ನೋಡಿ ನಾನು ಸಮಗ್ರ ವಿವರಗಳ ಒಂದು ಪುಸ್ತಕ ತರುತ್ತೇನೆ ಎನ್ನುವ ಬೆಳೆಗೆರೆ ನ್ಯಾಯಮೂರ್ತಿ ಹೆಗಡೆ ಅವರನ್ನೇ ಅನುಮಾನದಿಂದ ನೋಡಿದ್ದಾರೆ. ಕರ್ನಾಟಕದ ಜನತೆ ಹೆಗಡೆಯವರ ಬಗ್ಗೆ ಅಪಾರ ಗೌರವ ಹೊಂದಿರುವಾಗ ತಮ್ಮ ಪತ್ರಿಕೆಯಲ್ಲಿ ಈ ರೀತಿ ಬರೆಯುವುದು ಅವರಿಗೆ ಮುಜುಗರ ನೀಡಿತೋ ಇಲ್ಲವೋ... ? ಲೋಕಾಯುಕ್ತ ಹೆಗಡೆಯವರ ದಾಖಲೆಗಳಲ್ಲಿ ಅಂತಹ ಶಕ್ತಿ ಇಲ್ಲ ಎಂದ ರವಿ ಬೆಳೆಗೆರೆ ತಮ್ಮ ಪತ್ರಿಕೆಗಳ ಬಳಿ ದಾಖಲೆ ಇದ್ದರೆ ಬರೆಯಬಹುದಾಗಿತ್ತು. ನ್ಯೂಸ್ ಚಾನೆಲ್ ಗಳ ವೇಗವಾಗಿ ಸುದ್ದಿ ಕೊಡುವ ಭರವಸೆಯಲ್ಲಿ ಇದ್ದದನ್ನು ಇಲ್ಲದ್ದನ್ನು ಹೇಳುವ ಹಾಗೂ ಪ್ರಾಮುಖ್ಯತೆ ಇಲ್ಲದ ಸುದ್ದಿಗಳಿಗೆ, ವರದಿಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಜೊತೆಗೆ ಯಾರೇ ಪತ್ರಕರ್ತರು ರಾಜಕಾರಿಣಿ ,ಸಮಾಜ ಸೇವಕರ ಬಗ್ಗೆ ಬರೆಯುವಾಗ ಭಾಷೆಯ ಮೇಲೆ ಹಿಡಿತವಿಟ್ಟುಕೊಳ್ಳುವ ಕಾಲ ಯಾವಾಗ ಬರುತ್ತೋ....?
ಸದಾ ಮಂದಸ್ಮಿತರಾದ ಸದಾನಂದಗೌಡರು ನಾಡಿನ ಮುಖ್ಯಮಂತ್ರಿಯಾಗಿದ್ದಾರೆ, ಇಂತಹ ಸಂದರ್ಭದಲ್ಲಿ ಅವರಿಗೆ ಮನ ನೋಯುವಂತಹ ಬರಹಗಳ ಬದಲು ಸರ್ಕಾರ ಮುಂದೆ ಮಾಡಬೇಕಾದ ಕೆಲಸಗಳ ಪಟ್ಟಿ ಕೊಡಿರಿ.
ಜಗದೀಶ ಶೆಟ್ಟರ ಗೆ ಹೋಲಿಸಿದರೆ ಸದಾನಂದಗೌಡರು ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥೈ ಉಳ್ಳವರು. ಅವರಿಗೆ ನಮ್ಮಿಂದ ಸಲಹೆ ಸಹಕಾರ ಕೊಡೋಣ. ಕೇಂದ್ರದಲ್ಲಿ ಎರಡು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿರುವುದರಿಂದ ಕೇಂದ್ರದ ಯೋಜನೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಆ ಬಣ, ಈ ಬಣ ಎನ್ನದೇ ಕರ್ನಾಟಕ ಬಿಜೆಪಿ ಶಾಸಕರು ಗೌಡರಿಗೆ ನಿರಂತರ ಬೆಂಬಲ ನೀಡಿದರೆ ಗೌಡರಿಂದ ಒಳ್ಳೆಯ ಆಡಳಿತ ನಿರೀಕ್ಷಿಸಬಹುದು.ವಿರೋಧ ಪಕ್ಷಗಳು ಅಭಿವೃದ್ಧಿಯ ವಿಷಯದಲ್ಲಿ ಕೈ ಜೋಡಿಸಿದರೆ ಗೌಡರಿಂದ ನಾಡಿಗೆ ಒಳ್ಳೆಯದಾದೀತು.... ಅಲ್ಲವೇ...
ಪತ್ರೇಶ್ ಹಿರೇಮಠ

ಇದನ್ನೆಲ್ಲ ನೋಡಿದರೆ, ಪತ್ರಿಕೋದ್ಯಮದಲ್ಲಿ ಭಾಷೆಯ ಬಳಕೆಗೆ ಒಂದು ಕಾನೂನು ಅವಷ್ಯವೇನೋ ಅನಿಸುತ್ತದೆ.
ಪ್ರತ್ಯುತ್ತರಅಳಿಸಿ