ಈಗಲೂ ಭಾರತದ ಕೆಲ ಹಳ್ಳಿಗಳಲ್ಲಿ ಅಥವಾ ಎಲ್ಲಿಯೇ ಆಗಲಿ ನದಿ ದಾಟಲು ನದಿ, ಹೊಳೆಯಲ್ಲಿ ದೋಣಿ ಹತ್ತುವಾಗ ದೋಣಿಯ ನಾವಿಕರು, ಇಲ್ಲವೇ ಬೋಟ್ ಅಪರೇಟರ್ ಗಳು ಚಪ್ಪಲಿ, ಶೂ, ಬಿಟ್ಟು ದೋಣಿ ಹತ್ತಿ ನದಿ,ಗಂಗಾಮಾತೆ ಹಾಗಾಗಿ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಹತ್ತಿ ಎಂದು ಕೂಗುತ್ತಾರೆ.
ಯಾಕೆ ಚಪ್ಪಲಿ ಬಿಡಬೇಕು ಹೇಗೂ ದೋಣಿಯಲ್ಲಿ ಹೋಗುತ್ತೀವಲ್ಲ ಎಂದು ಕೇಳಿ ನೋಡಿ ಅವರ ಉತ್ತರ ಒಂದೇ ತಾಯಿ ಗಂಗಾಮಾತೆಯ ಮೇಲೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳಬಾರದು ಎನ್ನುತ್ತಾರೆ. ಅದರಲ್ಲು ಕೆಲ ಸಂಪ್ರದಾಯ ವಿರೋಧಿಗಳು ನಾವೇನು ಚಪ್ಪಲಿ ಶೂ ಧರಿಸಿ ನೀರಿಗೆ ಇಳಿಯುತ್ತಿಲ್ಲವಲ್ಲ ಎಂದು ವಾದಿಸುತ್ತಾರೆ.
ಕೊನೆಗೂ ನಾವಿಕರ ಉತ್ತರ ಚಪ್ಪಲಿ ಬಿಟ್ಟು ಹತ್ತುವುದಾದರೆ ಹತ್ತಿ ಇಲ್ಲಾಂದ್ರೆ ಕೇಳಗೆ ಇಳೀರಿ.....
ಇದು ದೋಣಿಯಲ್ಲಿ ನದಿ ದಾಟುವಾಗ ಎಲ್ಲರಿಗೂ ಆಗುವ ಅನುಭವ.... ಅಲ್ಲವೇ..?
ಇದರ ಉದ್ದೇಶ ಇಷ್ಟೆ.....
ಹೊಳೆ ಅಥವಾ ನದಿ ದಾಟುವಾಗಿನ ಸಂದರ್ಭಗಳಲ್ಲಿ ದೋಣಿ ಅಪಾಯಕ್ಕೆ ಈಡಾಗಿ ಮುಳುಗುವ ಅಥವಾ ಜೋರಾಗಿ ಗಾಳಿಬೀಸಿ ದೋಣಿ ನಿಯಂತ್ರಣ ತಪ್ಪಿದರೆ, ಅಥವಾ ನಡುನೀರಿನಲ್ಲಿ ದೋಣಿ ಸುಳಿಗೆ ಸಿಲುಕಿದರೆ ಹಾಗೂ ದೋಣಿಯೊಳಗಡೆ ನೀರು ಬರಲಾರಂಭಿಸಿದರೆ ದೋಣಿ ಅಥವಾ ಯಾಂತ್ರೀಕೃತ ದೋಣಿಗಳು ಕೂಡಾ ಮುಳುಗುವ ಸಂಭವವೇ ಹೆಚ್ಚು.. ಹಾಗಾಗಿ ದೋಣಿ ಮಳುಗಿದ ಸಂದರ್ಭದಲ್ಲಿ ಕಾಲಲ್ಲಿ ಚಪ್ಪಲಿ ಅಥವಾ ಶೂ, ಸಾಕ್ಸ್ ಧರಿಸಿದ್ದಲ್ಲಿ ಒಂದು ವೇಳೆ ದೋಣಿ ಮುಳುಗಿದರೆ ಈಜಲು ಬರುವುದಿಲ್ಲ. ನೀರಿನಲ್ಲಿ ಬಿದ್ದ ಮೇಲೆ ಶೂ ಕಳಚುವುದು, ಸಾಕ್ಸ್ ಕಳಚುವುದು, ಚಪ್ಪಲಿ ಕಳಚುವುದು ಅಸಾಧ್ಯದ ಮಾತು. ಜೀವ ಭಯದ ನಡುವೆ ನೀರಲ್ಲಿರುವಾಗ ಚಪ್ಪಲಿ, ಶೂ, ಸಾಕ್ಸ್ ಕಳಚುತ್ತಾ ನಿಂತರೆ ಬದುಕಲು ಸಾಧ್ಯವೇ.....?
ಹಾಗಾಗಿ ಹಿರಿಯರು ಇಂತಹ ಅಪಾಯವನ್ನು ಗ್ರಹಿಸಿ ದೇವರು ಮೇಲೆ ಭಯ ಹಾಕಿ" ಗಂಗಾ ಮಾತೆ ದಾಟುವಾಗ ಚಪ್ಪಲಿ ಹಾಕಬಾರದು" ಎಂಬ ನಂಬಿಕೆಯನ್ನು ದೈವದ ಭಯದಲ್ಲಿ ಸೃಷ್ಟಿಸಿದ್ದಾರೆ.
ಈಗಿನವರಿಗೆ ದೋಣಿ ಹತ್ತುವ ಮುನ್ನ ಚಪ್ಪಲಿ ಯಾಕೆ ಹಾಕಿಕೊಳ್ಳಬಾರದು ಎಂದಾಗ ಮೇಲಿನ ಸತ್ಯ ಹೇಳಿದರೆ ದೋಣಿ ಮುಳುಗಿದಾಗ ಬಿಚ್ಚುತ್ತೇವೆ ಎನ್ನತ್ತಾರೇನೋ....?
ಹಾಗಾಗಿಯೇ ಹಿರಿಯರು ದೇವರ ಭಯದಲ್ಲಿ ಬದುಕಿಗೆ ಹಾಗೂ ಜೀವಕ್ಕೆ ಉಪಯುಕ್ತವಾದ ಇಂತಹ ನಂಬಿಕೆ ಜಾರಿಯಲ್ಲಿಟ್ಟಿದ್ದಾರೆ. ಇದು ನನಗನಿಸಿದ್ದು ..... ಇದಕ್ಕೆ ನೀವೇನಂತೀರಿ.....?
ಪತ್ರೇಶ್ ಹಿರೇಮಠ್

ಈ ಲೇಖನ ಎಲ್ಲವೂ ಮೂಢನಂಬಿಕೆಗಳಲ್ಲ ಅದರಲ್ಲೂ ಒಂದು ಅರ್ಥ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಬಗ್ಗೆಯೇ ಹೊರತು ಕೆಟ್ಟ ಮೂಢನಂಬಿಕೆಗಳಿಗೆ ನಾನು ಕೂಡಾ ವಿರೋಧಿಯೇ
ಪ್ರತ್ಯುತ್ತರಅಳಿಸಿಗೇಳೆಯರೊಬ್ಬರ ದೂರವಾಣಿ ಕರೆಗೆ ಈ ಪ್ರತಿಕ್ರಿಯೆ
ಪತ್ರೇಶ್ ಹಿರೇಮಠ
ಲೇಖನ ಚೆನ್ನಾಗಿದೆ. ಹಿರಿಯರು ಸೃಷ್ಟಿಸಿದ ನಂಬಿಕೆ ಹಿಂದಿನ ಉದ್ದೇಶ ಖಂಡಿತ ಮೂಢ ಅಲ್ಲ. ಅದರಲ್ಲಿ ಅರ್ಥವಿದೆ.
ಪ್ರತ್ಯುತ್ತರಅಳಿಸಿhttp://varadigara.blogspot.com
ಸಾರ್ ನಮಸ್ಕಾರ. ನೀವು ಮರಳಿ ವೇದಗಳಿಗೆ ಹೊರಟಿದ್ದೀರೋ ಹೇಂಗೆ? ಕಾರ ಹುಣ್ಣಿಮೆ ತಡಕೊಂಡ್ವಿ,ಈಗೇನಪ್ಪ ಮತ್ತೊಂದು?ಚೆನ್ನಾಗಿದೆ ಪತ್ರೇಶ. ನನ್ನ ಕೆಲವು ಪ್ರಶ್ನೆಗಳಿವೆ ಉತ್ತರಿಸುತ್ತೀರಾ? ದೇವರಿಗೆ ಮಂಗಳಾರತಿ ಪೂಜೆ ಮಾಡುವಾಗ ಗಂಟೆ ಜಾಗಟೆ ಬಾರಿಸುತ್ತಾರೆ ಏಕೆ? ಮತ್ತು ಅಷಾಢ ಮಾಸವು ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲವೆಂದು ಕಾರಣವೇನು? ಹೇಳಿ.
ಪ್ರತ್ಯುತ್ತರಅಳಿಸಿಪ್ರೀತಿಯ ಶಿವಾನಂದ ಅವರೇ,
ಪ್ರತ್ಯುತ್ತರಅಳಿಸಿನಿಮ್ಮ ಪ್ರಶ್ನೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಲೇಖನದ ಮೂಲಕ ಉತ್ತರ ನೀಡಲು ಪ್ರಯತ್ನಿಸುತ್ತೇನೆ.ನಿಮ್ಮ ಪ್ರತಿಕ್ರಿಯೆ ಹೀಗೆ ನಿರಂತರವಾಗಿರಲಿ
ಪತ್ರೇಶ್ ಹಿರೇಮಠ್
jeeva rakshaka ganga maatege gourava needuvudu sari.
ಪ್ರತ್ಯುತ್ತರಅಳಿಸಿಪತ್ರೇಶ್ ನೀವು ಹೇಳಿದ್ದು, ವಿಚಾರ ಮಾಡಿದ್ದು ಸರಿ. ದೇವರ ಹೆಸರಿನ ಭಯದ ಹಿಂದೆ ಸೂಕ್ತ ಕಾರಣವು ಇರುತ್ತದೆ. ದೇವರಿಗೆ ಜಾಗಟೆ, ಗಂಟೆ ಬಾರಿಸುವುದರ ಹಿಂದೆ ಜೋರಾದ ಧ್ವನಿಯು ಮನುಷ್ಯನ ಮನಸನ್ನು ದೇವರ ಕಡೆ ಜಾಗೃತಗೊಳಿಸುವ ಉದ್ದೇಶವಾಗಿದೆ. ಆಷಾಢ ಮಾಸದಲ್ಲಿ ಶುಭ ಕಾರ್ಯ ಮಾಡದಿರಲೂ ಹೀಗೆ ಒಂದು ಅರ್ಥ ಇದ್ದೇ ಇರುತ್ತದೆ.
ಪ್ರತ್ಯುತ್ತರಅಳಿಸಿ