30 ಜೂನ್, 2011

ಚಪ್ಪಲಿ ಶೂ, ಸಾಕ್ಸ್ ಹಾಕಿಕೊಂಡು ದೋಣಿ ಹತ್ತಬಾರದು...? ಏಕೆ...?

ಈಗಲೂ ಭಾರತದ ಕೆಲ  ಹಳ್ಳಿಗಳಲ್ಲಿ ಅಥವಾ ಎಲ್ಲಿಯೇ ಆಗಲಿ ನದಿ ದಾಟಲು ನದಿ, ಹೊಳೆಯಲ್ಲಿ  ದೋಣಿ ಹತ್ತುವಾಗ ದೋಣಿಯ ನಾವಿಕರು, ಇಲ್ಲವೇ ಬೋಟ್ ಅಪರೇಟರ್ ಗಳು ಚಪ್ಪಲಿ, ಶೂ, ಬಿಟ್ಟು ದೋಣಿ ಹತ್ತಿ ನದಿ,ಗಂಗಾಮಾತೆ ಹಾಗಾಗಿ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಹತ್ತಿ ಎಂದು ಕೂಗುತ್ತಾರೆ. 
 ಯಾಕೆ ಚಪ್ಪಲಿ ಬಿಡಬೇಕು ಹೇಗೂ ದೋಣಿಯಲ್ಲಿ ಹೋಗುತ್ತೀವಲ್ಲ ಎಂದು ಕೇಳಿ ನೋಡಿ ಅವರ ಉತ್ತರ ಒಂದೇ ತಾಯಿ ಗಂಗಾಮಾತೆಯ ಮೇಲೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳಬಾರದು ಎನ್ನುತ್ತಾರೆ. ಅದರಲ್ಲು ಕೆಲ ಸಂಪ್ರದಾಯ ವಿರೋಧಿಗಳು ನಾವೇನು ಚಪ್ಪಲಿ ಶೂ ಧರಿಸಿ ನೀರಿಗೆ ಇಳಿಯುತ್ತಿಲ್ಲವಲ್ಲ  ಎಂದು ವಾದಿಸುತ್ತಾರೆ.
ಕೊನೆಗೂ ನಾವಿಕರ ಉತ್ತರ ಚಪ್ಪಲಿ ಬಿಟ್ಟು ಹತ್ತುವುದಾದರೆ ಹತ್ತಿ ಇಲ್ಲಾಂದ್ರೆ ಕೇಳಗೆ ಇಳೀರಿ.....
ಇದು ದೋಣಿಯಲ್ಲಿ ನದಿ ದಾಟುವಾಗ ಎಲ್ಲರಿಗೂ ಆಗುವ ಅನುಭವ.... ಅಲ್ಲವೇ..?
 ಇದರ ಉದ್ದೇಶ ಇಷ್ಟೆ.....
ಹೊಳೆ ಅಥವಾ ನದಿ ದಾಟುವಾಗಿನ ಸಂದರ್ಭಗಳಲ್ಲಿ  ದೋಣಿ ಅಪಾಯಕ್ಕೆ ಈಡಾಗಿ ಮುಳುಗುವ ಅಥವಾ ಜೋರಾಗಿ ಗಾಳಿಬೀಸಿ ದೋಣಿ ನಿಯಂತ್ರಣ ತಪ್ಪಿದರೆ, ಅಥವಾ ನಡುನೀರಿನಲ್ಲಿ ದೋಣಿ ಸುಳಿಗೆ ಸಿಲುಕಿದರೆ ಹಾಗೂ ದೋಣಿಯೊಳಗಡೆ ನೀರು ಬರಲಾರಂಭಿಸಿದರೆ ದೋಣಿ ಅಥವಾ ಯಾಂತ್ರೀಕೃತ ದೋಣಿಗಳು ಕೂಡಾ ಮುಳುಗುವ ಸಂಭವವೇ ಹೆಚ್ಚು..  ಹಾಗಾಗಿ ದೋಣಿ ಮಳುಗಿದ ಸಂದರ್ಭದಲ್ಲಿ  ಕಾಲಲ್ಲಿ ಚಪ್ಪಲಿ ಅಥವಾ ಶೂ, ಸಾಕ್ಸ್ ಧರಿಸಿದ್ದಲ್ಲಿ  ಒಂದು ವೇಳೆ ದೋಣಿ ಮುಳುಗಿದರೆ ಈಜಲು ಬರುವುದಿಲ್ಲ.  ನೀರಿನಲ್ಲಿ ಬಿದ್ದ ಮೇಲೆ ಶೂ ಕಳಚುವುದು, ಸಾಕ್ಸ್ ಕಳಚುವುದು, ಚಪ್ಪಲಿ ಕಳಚುವುದು ಅಸಾಧ್ಯದ ಮಾತು. ಜೀವ ಭಯದ ನಡುವೆ ನೀರಲ್ಲಿರುವಾಗ ಚಪ್ಪಲಿ, ಶೂ, ಸಾಕ್ಸ್ ಕಳಚುತ್ತಾ ನಿಂತರೆ ಬದುಕಲು ಸಾಧ್ಯವೇ.....?
ಹಾಗಾಗಿ ಹಿರಿಯರು ಇಂತಹ ಅಪಾಯವನ್ನು ಗ್ರಹಿಸಿ ದೇವರು ಮೇಲೆ ಭಯ ಹಾಕಿ" ಗಂಗಾ ಮಾತೆ ದಾಟುವಾಗ ಚಪ್ಪಲಿ ಹಾಕಬಾರದು" ಎಂಬ ನಂಬಿಕೆಯನ್ನು ದೈವದ ಭಯದಲ್ಲಿ ಸೃಷ್ಟಿಸಿದ್ದಾರೆ.
ಈಗಿನವರಿಗೆ ದೋಣಿ ಹತ್ತುವ ಮುನ್ನ ಚಪ್ಪಲಿ ಯಾಕೆ ಹಾಕಿಕೊಳ್ಳಬಾರದು ಎಂದಾಗ ಮೇಲಿನ ಸತ್ಯ ಹೇಳಿದರೆ ದೋಣಿ ಮುಳುಗಿದಾಗ ಬಿಚ್ಚುತ್ತೇವೆ ಎನ್ನತ್ತಾರೇನೋ....?
ಹಾಗಾಗಿಯೇ ಹಿರಿಯರು ದೇವರ ಭಯದಲ್ಲಿ ಬದುಕಿಗೆ ಹಾಗೂ ಜೀವಕ್ಕೆ ಉಪಯುಕ್ತವಾದ  ಇಂತಹ ನಂಬಿಕೆ  ಜಾರಿಯಲ್ಲಿಟ್ಟಿದ್ದಾರೆ.  ಇದು ನನಗನಿಸಿದ್ದು ..... ಇದಕ್ಕೆ ನೀವೇನಂತೀರಿ.....?


                                                                                        ಪತ್ರೇಶ್ ಹಿರೇಮಠ್

25 ಜೂನ್, 2011

ಹೊಸದಾಗಿ ಮದುವೆಯಾದವರು ಕಾರ ಹುಣ್ಣಿಮೆ ದಿನ ಕರಿ ಹರಿಯುವಾಗ ಹೊರಗೆ ಯಾಕೆ ಹೋಗಬಾರದು...?

ಕಾರಹುಣ್ಣಿಮೆ ದಿನ ಎತ್ತುಗಳನ್ನು ಕರಿ ಹರಿಯುವಾಗ ಹೊಸದಾಗಿ ಮದುವೆಯಾದೆವರು ಹೊರಗಡೆ ಹೋಗಬಾರದು ಎಂಬ ಪ್ರತೀತಿ ಈಗಲೂ ಹಳ್ಳಿಗಳಲ್ಲಿ ಇದೆ. ಇಂದಿಗೂ ಹಳ್ಳಿಗಳಲ್ಲಿ ಹೊಸ ಮದುಮಗನನ್ನು ಹೊರಗೆ ಬಿಡುವುದಿಲ್ಲ. ಇತ್ತೀಚಿನ ಕೆಲವರು ಇದನ್ನು ಮೂಢನಂಬಿಕೆ ಎಂದು ಮೂಗು ಮುರಿಯುತ್ತಾರೆ.
 ಆದರೆ ಹಿಂದಿನವರು ಇಂತಹ ಪ್ರತೀತಿಗಳನ್ನು ಸುಮ್ಮನೆ ಮಾಡಿರುವುದಿಲ್ಲ.  ನಮ್ಮ ಹಿಂದಿನ ಹಿರಿಯರ ಪಧ್ಧತಿ, ಪ್ರತೀತಿ, ನಂಬಿಕೆಗಳನ್ನು ಇವತ್ತಿನ ಪೀಳಿಗೆಯ ನಾವುಗಳು ಮೂಢನಂಬಿಕೆ ಎಂದು ಮೂದಲಿಸುತ್ತೇವೆ. ಆದರೆ ಹಿರಿಯರು ಮಾಡಿದ ಈ ನಂಬಿಕೆ ಅಂದಿನ ಕಾಲಕ್ಕೆ ಸತ್ಯವೂ ಆಗಿದೆ ಇಂದಿಗೂ ಹಳ್ಳಿಗಳಲ್ಲಿ ಕೃಷಿ ಅವಲಂಬಿತ ಯುವಕರಿಗೂ ಅನ್ವಯಿಸುತ್ತದೆ. ಹಿಂದೆ ನಗರ ಪ್ರದೇಶಗಳಲ್ಲಿ ನೌಕರಿ ಮಾಡುವ ಯುವಕರ ಸಂಖ್ಯೆ ಕಡಿಮೆ ಇತ್ತು. ಜೊತೆಗೆ ಬಹಳಷ್ಟು ಹಳ್ಳಿಗಳ ಯುವಕರು ಬೇಸಾಯದ ಮೇಲೆಯೇ ಜೀವನ ಸಾಗಿಸುತ್ತಿದ್ದರು. ಕೃಷಿಯ ಮೂಲವಾದ ಎತ್ತುಗಳನ್ನು ಯುವಕರು ಅತ್ಯಂತ ಪ್ರೀತಿಯಿಂದ ಸಾಕುತ್ತಾರೆ.
ಅವರಿಗೆ ತಮ್ಮ ಎತ್ತುಗಳು ಕಾರ ಹುಣ್ಣಿಮೆಯಲ್ಲಿ ಕರಿ ಹರಿಯುವಾಗ ಮೊದಲ ಸ್ಥಾನದಲ್ಲಿ ಬರಬೇಕು ಎಂಬ ಆಸೆ ಇರುತ್ತದೆ. ಆದರೆ ಎತ್ತುಗಳು ಓಡಿ ಗೆಲ್ಲಲು ಸಾಕಿ ಜೋಪಾನ ಮಾಡಿದ ಯುವಕನೂ ಎತ್ತುಗಳ ಹಿಂದೆ ಓಡುತ್ತಾ ಹುರಿದುಂಬಿಸಬೇಕು. ಆಗ ಮಾತ್ರ ಎತ್ತುಗಳು ಗೆಲ್ಲಲು ಸಾಧ್ಯ. ಆದರೆ ಎತ್ತುಗಳ ಹಿಂದೆ ಓಡುವುದು ಅಪಾಯಕಾರಿ ಕೆಲಸ, ಅಲ್ಲಿ ಆಪತ್ತು ಕಾದಿರುತ್ತದೆ. ಹಾಗಾಗಿ ಹೊಸದಾಗಿ ಮದುವೆಯಾದವರ ಪ್ರಾಣಕ್ಕೆ ತೊಂದರೆಯಾಗಲಿ ಅಥವಾ ಮೈ ಕೈಗೆ ಅನಾಹುತವಾಗದಿರಲಿ ಎಂಬರ್ಥದಲ್ಲಿ ಈ ನಂಬಿಕೆ ಪ್ರಚಲಿತದಲ್ಲಿದೆ. ಇದು ನನ್ನ ಯೋಚನಾಮಟ್ಟಕ್ಕೆ ಹೊಳೆದ ಸಂಗತಿ ... ಇದಕ್ಕೆ ನಿಮ್ಮ ಅಭಿಪ್ರಾಯವೇನು......?