ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರಂತರವಾಗಿ ಕ್ರಿಯಾಶೀಲ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಅಭಿವೃಧ್ಧಿ ಪರ ಶಕೆ ಆರಂಭಿಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ಹಿಂದುಳಿದ, ದಲಿತರ, ಅಲ್ಪಸಂಖ್ಯಾತ, ಮತ್ತು ಸಾಮಾನ್ಯ ಬಡವರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ನಿಜವಾಗಿಯೂ ಅಸಹಾಯಕರ ಧ್ವನಿ ಎಂಬುದನ್ನು ಅಧಿಕಾರ ಬಳಕೆಯ ಮೂಲಕ ಸಾಬೀತು ಪಡಿಸಿದ್ದಾರೆ.
ಅಧಿಕಾರಕ್ಕೆ ಬಂದ ಕೂಡಲೇ ಒಂದು ರೂಗೆ ಕೆಜಿಗೆ ಅಕ್ಕಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾದ ಹಾಲು ನೀಡುವ ಮೂಲಕ ಬಡವರ ಹಸಿವಿನ ಬವಣೆ ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಿದ್ದು ಶ್ಲಾಘನೀಯ ಸಂಗತಿ. ಅಕ್ಕಿ ಮತ್ತು ಹಾಲು ನೀಡಿದ್ದಕ್ಕೆ ಯಾರು ಏನೇ ಟೀಕೆ ಮಾಡಲಿ ನಿಜವಾದ ಬಡವರ ಪರ ಆಲೋಚನೆ ಮಾಡಿ ತಂದ ಯೋಜನೆಗಳು ಇವು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇತ್ತೀಚೆಗೆ ತಾಲೂಕಿಗೊಂದು ಡಯಾಲಿಸಿಸ್ ಘಟಕಗಳನ್ನು ತೆರೆಯುವ ಮೂಲಕ ಆರೋಗ್ಯ ಭಾಗ್ಯ ನೀಡುವ ಮೂಲಕ ಬಡವರ ಆರೋಗ್ಯ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಕಾಂಗ್ರೆಸ್ ನಿಜ ಬಡವರ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಜೊತೆಗೆ ಅವಿವಾಹಿತ ಮಹಿಳೆಯರ ಅಭದ್ರ ಬದುಕಿಗೆ ಆಸರೆಯಾಗಿ ಅವರ ತಿಂಗಳ ನೈಜ ಬದುಕಿನ ಖರ್ಚು ವೆಚ್ಚ ಹಾಗೂ ಜೀವನ ಭದ್ರತೆಗಾಗಿ 40 ವರ್ಷ ಮೀರಿದ ನಿರ್ಗತಿಕ ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವುದು ಮತ್ತು ಪರಿತ್ಯಕ್ತ (ಗಂಡ ಬಿಟ್ಟಿರುವ)ಇದರಲ್ಲಿ 45ರಿಂದ 65ವರ್ಷ ವಯಸ್ಸಿನ 12,000-17,000 ಆದಾಯ ಹೊಂದಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ 500 ಮಾಸಾಸನ ನೀಡಲಾಗುತ್ತದೆ ಪರಿತ್ಯಕ್ತ ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವ ಯೋಜನೆ ಜಾರಿಗೆ ತರುವ ಮೂಲಕ ಇಡೀ ದೇಶಕ್ಕೆ ಮಾದರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಗೋಚರಿಸುತ್ತಿದ್ದಾರೆ.
ಇನ್ನು ಮೈತ್ರಿ ಯೋಜನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ 500 ಪಿಂಚಣಿ ನೀಡಲಾಗುತ್ತದೆ. ಇವರು ಮತದಾರರ ಗುರುತಿನ ಚೀಟಿ, ಲೈಂಗಿತ ಅಲ್ಪಸಂಖ್ಯಾತರು ಎನ್ನುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದೃಢೀಕರಣ ಪತ್ರ. ಲೈಂಗಿಕ ಅಲ್ಪಸಂಖ್ಯಾತರ ಸಂಸ್ಥೆಯಲ್ಲಿ ನೋಂದಣೆಯಾಗಿರುವವರಿಗೆ ಈ ಸೌಲಭ್ಯ ನೀಡಿದ ಮೊದಲ ಸರ್ಕಾರ ಕರ್ನಾಟಕ ಸರ್ಕಾರ ಮೊದಲನೆಯದಾಗಲಿದೆ.
ಇಷ್ಟೆಲ್ಲಾ ಬಡವರ ಪರ ಯೋಜನೆ ಜಾರಿಗೆ ತರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಕೆಲವರ ಅಸ್ಥಿಮಿತ ಟೀಕೆಗಳು ನಿಷ್ಪ್ರಯೋಜಕ.
ಅಧಿಕಾರಿಗಳ ಮೇಲಿನ ಬಿಗಿ ಹಿಡಿತ ಮತ್ತು ಲಂಚರಹಿತ ಆಡಳಿತ ಸಿದ್ದರಾಮಯ್ಯನವರ ಕನಸು ಈಡೇರುವ ದಿನ ದೂರವಿಲ್ಲ....
ಪತ್ರೇಶ್ ಹಿರೇಮಠ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ