30 ಏಪ್ರಿಲ್, 2020

ಕೊರೊನಾ ಟೆಸ್ಟ್ ಕಿಟ್‌ಗಳಿಗೆ ಕೇಂದ್ರ ಸರ್ಕಾರದಿಂದ ಚೀನಾಕ್ಕೆ ದುಪ್ಪಟ್ಟು ಹಣ ಕೊಟ್ಟ ಆರೋಪ

ಸರಿಯಾದ ಫಲಿತಾಂಶ ನೀಡುತ್ತಿಲ್ಲ ಎಂದು ರಾಜ್ಯ ಸರರ್ಕಾರಗಳು ತಡೆಹಿಡಿದಿದ್ದ ಕೊರೊನಾ ಟೆಸ್ಟ್ ಕಿಟ್‌ಗಳಿಗೆ ಕೇಂದ್ರ ಸರ್ಕಾರವು ಚೀನಾಕ್ಕೆ ಎರಡುಪಟ್ಟು ಹಣವನ್ನು ಪಾವತಿಸಿದೆ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರವಾಗಿ ವಿತರಕ ಮತ್ತು ಆಮದುದಾರರ ನಡುವೆ ವಿವಾದವಾಗಿ ದೆಹಲಿ ಹೈ ಕೋರ್ಟಿನಲ್ಲಿ ಕಾನೂನು ಸಮರ ನಡೆಯುತ್ತಿರುವುದರಿಂದ ಈ ವಿಚಾರ ಹೊರ ಬಂದಿದೆ. ಕೊರೊನಾ ಪರೀಕ್ಷಾ ಕಿಟ್‌ಗಳ ಭಾರತೀಯ ವಿತರಕರಾದ ರಿಯಲ್ ಮೆಟಾಬಾಲಿಕ್ಸ್ ದುಪ್ಪಟ್ಟು ಬೆಲೆಗೆ ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡಿತ್ತು ಎಂದು ಎನ್ಡಿಟಿವಿ ವರದಿ ಮಾಡಿದೆ.
ಕೇಂದ್ರ ಸರ್ಕಾರ ಮಾರ್ಚ್ 27 ರಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮೂಲಕ ಚೀನಾದ ಸಂಸ್ಥೆ ವೊಂಡ್‌ಫೊದಿಂದ ಐದು ಲಕ್ಷ ಕ್ಷಿಪ್ರ ಆಂಟಿ ಬಾಡಿ ಪರೀಕ್ಷಾ ಕಿಟ್‌ಗಳನ್ನು ಆದೇಶಿಸಿತ್ತು.
ಏಪ್ರಿಲ್ 16 ರಂದು ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಕ್ಷಿಪ್ರ ಆಂಟಿಬಾಡಿ ಟೆಸ್ಟ್ ಮತ್ತು ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳನ್ನು ಒಳಗೊಂಡಂತೆ 6,50,000 ಕಿಟ್‌ಗಳನ್ನು ಭಾರತಕ್ಕೆ ರವಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.
A total of 650,000 kits, including Rapid Antibody Tests and RNA Extraction Kits have been despatched early today from Guangzhou Airport to | @MEAIndia @HarshShringla @DrSJaishankar
585 people are talking about this
ಆಮದುದಾರ ಮ್ಯಾಟ್ರಿಕ್ಸ್ ಪರೀಕ್ಷಾ ಕಿಟ್‌ಗಳನ್ನು ತಲಾ 245 ರೂಗಳಿಗೆ ಚೀನಾದಿಂದ ಖರೀದಿಸಿದ್ದಾರೆ. ಇದನ್ನು ವಿತರಕರಾದ ರಿಯಲ್ ಮೆಟಾಬಾಲಿಕ್ಸ್ ಮತ್ತು ಆರ್ಕ್ ಫಾರ್ಮಾಸ್ಯುಟಿಕಲ್ಸ್ ಕಿಟ್ಟನ್ನು‌ ತಲಾ 600 ರೂ.ಗೆ ಸರ್ಕಾರಕ್ಕೆ ಮಾರಾಟ ಮಾಡಿದೆ, ಅಂದರೆ ಶೇಕಡಾ 60 ರಷ್ಟು ಲಾಭವನ್ನು ಇಟ್ಟುಕೊಂಡಿದೆ.
ತಮಿಳುನಾಡು ಸರ್ಕಾರವು ತಲಾ 600 ರೂ.ಗೆ ಚೀನೀ ಕಿಟ್‌ಗಳನ್ನು ಇನ್ನೊಂದು ವಿತರಕರಾದ ಶಾನ್ ಬಯೋಟೆಕ್ ಮೂಲಕ ಖರೀದಿಸಿದಾಗ ವಿವಾದ ಉಂಟಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ. ತಮಿಳುನಾಡು ಮತ್ತು ಶಾನ್ ಬಯೋಟೆಕ್ ನಡುವಿನ ಸಹಿ ಇರುವ ಆದೇಶ ಪತ್ರವನ್ನು ಪ್ರಕಟಿಸಿದೆ.
ರಿಯಲ್ ಮೆಟಾಬಾಲಿಕ್ಸ್, ಮ್ಯಾಟ್ರಿಕ್ಸ್ ಆಮದು ಮಾಡಿದ ಕಿಟ್‌ಗಳಿಗೆ ತಾನು ವಿಶೇಷ ವಿತರಕ ಎಂದು ಹೇಳಿಕೊಂಡು ಹೈಕೋರ್ಟ್ ನಲ್ಲಿ ದೂರು ದಾಖಲಿಸಿದೆ. ಒಪ್ಪಂದವನ್ನು ಉಲ್ಲಂಘಿಸಿ ತಮಿಳುನಾಡು ಮತ್ತೊಂದು ವಿತರಕರಲ್ಲಿ (ಶಾನ್ ಬಯೋಟೆಕ್) ಕಿಟ್ ಪಡೆದುಕೊಂಡಿದೆ ಎಂದು ರಿಯಲ್ ಮೆಟಾಬಾಲಿಕ್ಸ್ ಆರೋಪಿಸಿದೆ.
ನ್ಯಾಯಾಲಯವು ವಿವಾದವನ್ನು ಆಲಿಸುತ್ತಿರುವಾಗ, ಬೆಲೆಯು ದುಪ್ಪಟ್ಟಾಗಿದೆ ಎಂಬುದನ್ನು ಕಂಡುಕೊಂಡು ಪ್ರತಿ ಕಿಟ್‌ಗಳ ಬೆಲೆಯನ್ನು 400 ರೂ.ಗೆ ಇಳಿಸುವಂತೆ ನಿರ್ದೇಶಿಸಿದೆ.
“ಕಳೆದ ಒಂದು ತಿಂಗಳಿನಿಂದ ಆರ್ಥಿಕತೆಯು ಸ್ಥಗಿತಗೊಂಡಿದೆ. ಜನರ ಸುರಕ್ಷತೆಯು ಆತಂಕಕಾರಿ ವಿಷಯವಾಗಿದೆ. ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿದೆ ಎಂದು ಜನರಿಗೆ ಖಾತ್ರಿಪಡಿಸಲು, ಸಾಂಕ್ರಾಮಿಕ ವಿರುದ್ದದ ಯುದ್ಧದಲ್ಲಿ ತೊಡಗಿರುವವರನ್ನು ರಕ್ಷಿಸಲು, ದೇಶಾದ್ಯಂತ ವ್ಯಾಪಕವಾದ ಪರೀಕ್ಷೆಗಳನ್ನು ನಡೆಸಲು ಕಡಿಮೆ ವೆಚ್ಚದಲ್ಲಿ ಪರೀಕ್ಷಾ ಕಿಟ್‌ಗಳು ತುರ್ತಾಗಿ ಲಭ್ಯವಾಗಬೇಕು. ಸಾರ್ವಜನಿಕ ಹಿತಾಸಕ್ತಿ ಖಾಸಗಿ ಲಾಭಕ್ಕಿಂತ ಹೆಚ್ಚಿರಬೇಕು. ಪಕ್ಷಗಳ ನಡುವಿನ ದೊಡ್ಡ ವಿವಾದ, ಚರ್ಚೆ ಸಾರ್ವಜನಿಕ ಒಳಿತಿಗೆ ದಾರಿ ಮಾಡಿಕೊಡಬೇಕು. ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ಕಿಟ್‌ಗಳು / ಪರೀಕ್ಷೆಯನ್ನು ಜಿಎಸ್‌ಟಿಯನ್ನು ಒಳಗೊಂಡಂತೆ 400 ರೂ / ಮೀರದ ಬೆಲೆಗೆ ಮಾರಾಟ ಮಾಡಬೇಕು ”ಎಂದು ಹೈಕೋರ್ಟ್ ಹೇಳಿದೆ.


ಕಿಟ್‌ಗಳ ದುಪ್ಪಟ್ಟು ಬೆಲೆಯ ಬಗ್ಗೆ ಪ್ರತಿಕ್ರಿಯಿಸಿದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಅನುಮೋದಿತ ಶ್ರೇಣಿಯು ಶೀಘ್ರ ಟೆಸ್ಟ್ ಕಿಟ್‌ಗಾಗಿ 528 ರಿಂದ 795 ರೂ ಗಳ ದರವನ್ನು ಅನುಮೋದಿಸಲಾಗಿದೆ ಎಂದಿದೆ. “ಬೆಲೆ ಕಿಟ್‌ಗಳ ತಾಂತ್ರಿಕ ಅಂಶಗಳು, ಸೂಕ್ಷ್ಮತೆ, ನಿರ್ದಿಷ್ಟತೆ, ಇತ್ಯಾದಿ ಹಾಗೂ ಟೆಂಡರ್‌ನಲ್ಲಿ ಪಡೆದ ದರ, ಪೂರೈಕೆ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಕೌನ್ಸಿಲ್ ಹೇಳಿದೆ.
ಕಳೆದ ವಾರ, ಹಲವಾರು ರಾಜ್ಯಗಳು ದೂರು ನೀಡಿದ ನಂತರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವೊಂಡ್ಫೊ ಪರೀಕ್ಷಾ ಕಿಟ್‌ಗಳ ಬಳಕೆಯನ್ನು ನಿಲ್ಲಿಸಿತ್ತು.
ಮೂರು ರಾಜ್ಯಗಳು ಕಿಟ್‌ಗಳನ್ನು ಬಳಸಲು ನಿರಾಕರಿಸಿ, ದೋಷಗಳ ಬಗ್ಗೆ ದೂರು ನೀಡಿವೆ. ಕೇವಲ 5.4% ರಷ್ಟು ಪರೀಕ್ಷೆಗಳು ಮಾತ್ರ ಪರಿಣಾಮಕಾರಿ ಎಂದು ರಾಜಸ್ಥಾನ ಹೇಳಿತ್ತು. ಶೀಘ್ರ ಟೆಸ್ಟಿಂಗ್ ಕಿಟ್‌ಗಳ ಬಳಕೆಯನ್ನು ಎರಡು ದಿನಗಳವರೆಗೆ ತಡೆಹಿಡಿಯುವಂತೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರಾಜ್ಯಗಳನ್ನು ಕೇಳಿ ಕೊಂಡಿತ್ತು. ಕಿಟ್‌ಗಳು ಕೆಳಮಟ್ಟದ ಗುಣಮಟ್ಟದ್ದಾಗಿದೆ ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ.


naanu gouri

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ