ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬಸರಕೋಡಿನ "ಕೊಹಿಮ ಪಬ್ಲಿಕೇಶನ್ಸ್" ವತಿಯಿಂದ ಪ್ರಕಟಣೆಗಾಗಿ ಬರಹಗಾರರಿಂದ ಹತ್ತು (10) ಅಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಹತ್ತು ಕೃತಿಗಳಲ್ಲಿ ಕವನ ಸಂಕಲನ, ಕಥಾ ಸಂಕಲನ, ಲಲಿತ ಪ್ರಬಂಧ, ನಾಟಕ(ಸಾಮಾಜಿಕ ಹೊರತು ಪಡಿಸಿ) ಐತಿಹಾಸಿಕ,ಪೌರಾಣಿಕ ಪ್ರಸಿದ್ಧರ ವ್ಯಕ್ತಿ ಚಿತ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೂ ಅರ್ಥವಾಗುವಂತಹ ವಿಜ್ಞಾನಲೇಖನಗಳು,ವಿಜ್ಞಾನಿಗಳ ಪುಸ್ತಕಗಳಿಗೆ ಆದ್ಯತೆ ನೀಡಲಾಗುವುದು.ಆಸಕ್ತ ಬರಹಗಾರರು ತಮ್ಮ ಅಪ್ರಕಟಿತ ಕೃತಿಗಳನ್ನು ಡಿ.ಟಿ.ಪಿ. ಮಾಡಿಸಿ ಅದರ ಎರಡು ಪ್ರತಿಗಳನ್ನು ತಮ್ಮ ಇತ್ತೀಚಿನ ಸ್ಪಷ್ಟ ವಿಳಾಸ ಮೊಬೈಲ್ ಸಂಖ್ಯೆ ಅಥವಾ ಸ್ಥಿರ ದೂರವಾಣಿ ಸಂಖ್ಯೆಯೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲು ಕೋರಲಾಗಿದೆ. ಕೃತಿ ಸ್ವಾಮ್ಯ ಪ್ರಕಾಶಕರದಾಗಿರುತ್ತದೆ.
ವಿಳಾಸ:-
ಪತ್ರೇಶ್ ಹಿರೇಮಠ್
ಪ್ರಕಾಶಕ
"ಕೊಹಿಮ ಪಬ್ಲಿಕೇಶನ್ಸ್"
ಬಸರಕೋಡು (ಅಂಚೆ) 583224
ಹಗರಿಬೊಮ್ಮನಹಳ್ಳಿ (ತಾಲೂಕು)
ಬಳ್ಳಾರಿ (ಜಿ)
ಜಂಗಮ:- 9844338881
ಸ್ಥಿರ :- 08397249044
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ