ಬಳ್ಳಾರಿ ಜಿಲ್ಲೆಯ ಹಿಂದುಳಿದ ಹಾಗೂ ವಿವಿಧ ವೈಶಿಷ್ಟ್ಯ ಹೊಂದಿರುವ ಕೂಡ್ಲಿಗಿ ಕ್ಷೇತ್ರದ ಪರಿಸರ ಪ್ರೇಮಿ ಶಾಸಕ ನಾಗೇಂದ್ರರ ಆಪ್ತ ಸಹಾಯಕ ಡಾ || ವೆಂಕಟಗಿರಿ ದಳವಾಯಿಯವರ ವಿಶಿಷ್ಟ ಪ್ರಯತ್ನವಿದು. ಸಮಗ್ರ ಕೂಡ್ಲಿಗಿ ತಾಲೂಕಿನ ಪರಂಪರೆಯನ್ನೇ ಬಿಂಬಿಸುವಂತಹ ಗುಡ್ಡಗಾಡು, ಬೆಟ್ಟ, ಅರಣ್ಯ ಪ್ರದೇಶ, ಅಪರೂಪದ ಔಷಧಿ ಸಸ್ಯಗಳು, ಕಾಡುಪ್ರಾಣಿಗಳು,ಶಿಲಾಯುಗದ ಪಳಯುಳಿಕೆಗಳು, ವೀರಗಲ್ಲು, ಮಾಸ್ತಿಗಲ್ಲು, ಕಿಲಾರಿ ವಂಶಸ್ಥರು, ಬುಡಕಟ್ಟು ಜನರು ಹಾಗೂ ಕೂಡ್ಲಿಗಿ ತಾಲೂಕಿನ ಕಲೆ ಸಂಸ್ಕೃತಿಯನ್ನು ಶಾಸಕರು ಹಬ್ಬ ಹರಿದಿನಗಳಲ್ಲಿ ಶುಭಾಶಯ ಕಳುಹಿಸುವ ಶುಭಾಶಯ ಪತ್ರಗಳಲ್ಲಿ ಬಳಸಿಕೊಳ್ಳಲಾಗಿದೆ.
ಈ ಶುಭಾಶಯ ಪತ್ರದ ಚಿತ್ರಗಳಲ್ಲಿ ತಾವು ನೋಡುವಂತೆ ಶುಭಾಶಯ ಪತ್ರಗಳಿಗೆ ಸುಗಂಧಿ ಬಳ್ಳಿ, ನೆಲಬೇವು, ಕಾಡುಬಿಕ್ಕೆ, ಹೀಗೆ ವಿವಿಧ ಔಷಧಿ ಸಸ್ಯಗಳ ನೈಜ ಎಲೆಗಳನ್ನೇ ಶುಭಾಶಯ ಪತ್ರಗಳಿಗೆ ಅಂಟಿಸಿ ಅದರ ಅಡಿ ಇದನ್ನು ಯಾವ ಕಾಯಿಲೆಗಳಿಗೆ ಉಪಯೋಗಿಸಬಹುದು ಎಂಬುದನ್ನು ವಿವರಿಸಲಾಗಿದೆ.
ಮುಖಪುಟದಲ್ಲಿ ಶಾಸಕ ನಾಗೇಂದ್ರರ ಚಿತ್ರದ ಜೊತೆಗೆ ಅಪರೂಪದ ಪ್ರಾಣಿಗಳ ಚಿತ್ರ, ನಂತರ ಎರಡನೆಯ ಪುಟದಲ್ಲಿ ಅಪರೂಪಕ್ಕೆ ಕಾಣಸಿಗುವ ಪುಷ್ಪಗಳ ಸುಂದರ ಚಿತ್ರಗಳು, ಮೂರನೆಯ ಪುಟದಲ್ಲಿ ನೈಜ ಔಷಧಿ ಸಸ್ಯಗಳ ಎಲೆಗಳನ್ನೆ ಕಾಡಿನಿಂದ ಹುಡುಕಿ ತಂದು ಅಂಟಿಸಿದ್ದಾರೆ. ನಾಲ್ಕನೆಯ ಪುಟದಲ್ಲಿ ಕೂಡ್ಲಿಗಿ ತಾಲೂಕಿನ ಶಿಲಾಯುಗದ ಕುರುಹುಗಳಿರುವ ಕುಮತಿಯ ಶಿಲಾಯುಗದ ರಕ್ಕಸಗಲ್ಲು ಮತ್ತು ರಕ್ಕಸಮಟ್ಟಿಯ ಚಿತ್ರಗಳನ್ನು ಹಾಕಿ ಶುಭಾಶಯ ಪತ್ರ ರಚಿಸಲಾಗಿದೆ.ಈ ಶುಭಾಶಯ ಪತ್ರಗಳ ವಿಶೇಷವೇನೆಂದರೆ ನೈಜ ಸಸ್ಯಗಳನ್ನೇ ಶುಭಾಶಯ ಪತ್ರಕ್ಕೆ ಅಂಟಿಸಿರುವುದು. ಕಾಡಿಗೆ ಹೋಗಿ ಅಪರೂಪದ ಸಸ್ಯಗಳನ್ನು ಹುಡುಕಿ ತಂದು ಹಚ್ಚುವ ಕೆಲಸ ಸುಲಭದ್ದಲ್ಲ.
ಶಾಸಕ ನಾಗೇಂದ್ರರ ಈ ಪ್ರಯತ್ನಕ್ಕೆ ಮೆದುಳಾಗಿ ಕೈ ಹಾಕಿ ಈ ಯೋಜನೆ ಯಶಸ್ವಿಗೊಳಿಸುವಲ್ಲಿ ಅವರ ಆಪ್ತ ಸಹಾಯಕ ಡಾ|| ವೆಂಕಟಗಿರಿ ದಳವಾಯಿಯವರ ಶ್ರಮವೂ ಪ್ರಮುಖ ಕಾರಣ. ಡಾ|| ದಳವಾಯಿ ಮೂಲತಃ ಪಿಹೆಚ್ ಡಿ ಪದವೀಧರರು,ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು, ಹೊಸ ಹೊಸ ಯೋಜನೆಗಳ ಮೂಲಕ ಕ್ಷೇತ್ರದಲ್ಲಿ ಬದಲಾವಣೆಗೆ ಶಾಸಕರೊಂದಿಗೆ ಕೈ ಜೋಡಿಸಿದವರು. ಶಾಸಕರ ಆಪ್ತ ಸಹಾಯಕ ಹುದ್ದೆಯ ಜೊತೆ ಶಾಲೆಗಳಲ್ಲಿ ಉಪನ್ಯಾಸ, ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಕಲೆ, ಸಂಸ್ಕೃತಿ, ಸಾಹಿತ್ಯ, ಶೈಕ್ಷಣಿಕ ಅಭಿವೃಧ್ಧಿ ಗಾಗಿ ಶ್ರಮಿಸುತ್ತಿದ್ದಾರೆ.
ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಆಪ್ತ ಸಹಾಯಕ ಡಾ|| ವೆಂಕಟಗಿರಿ ದಳವಾಯಿಯವರಂತೆ ನಾಡಿನ ಎಲ್ಲಾ ಶಾಸಕರು, ಹಾಗೂ ಆಪ್ತ ಸಹಾಯಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇಂತಹ ಹೊಸ ಹೊಸ ಕಾರ್ಯಕ್ಕೆ ಕೈ ಹಾಕಿದರೆ ನಾಡಿನ ಜನರಲ್ಲಿ ಪರಿಸರ, ಸಂಸ್ಕೃತಿ, ಇತಿಹಾಸ ಪ್ರೇಮ ಉಳಿದೀತಲ್ಲವೇ..?
ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಆಪ್ತ ಸಹಾಯಕ ||ವೆಂಕಟಗಿರಿ ದಳವಾಯಿಯವರಿಗೆ ತಮ್ಮದೊಂದು ಅಭಿನಂದನೆ ಸಲ್ಲಿಸಿ
ಡಾ||ವೆಂಕಟಗಿರಿ ದಳವಾಯಿ ಮೊಬೈಲ್...9448234280
ಪತ್ರೇಶ್ ಹಿರೇಮಠ
ಹಗರಿಬೊಮ್ಮನಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ